Home
ಹಾನಗಲ್ಲ ಪುರಸಭೆಯ ಬಗ್ಗೆ:
ಹಾನಗಲ್ಲ ಪಟ್ಟಣವು ಧರ್ಮಾ ನದಿಗೆ ಹೊಂದಿಕೊಂಡು ಸ್ಥಾಪಿತವಾಗಿದ್ದು ಇದು ಬಹಳ ಹಳೆಯ ಇತಿಹಾಸವುಳ್ಳಂತಹ ಪಟ್ಟಣವಾಗಿದೆ. ಇದು ಹಿಂದೆ ಮಹಾಭಾರತ ಕಾವ್ಯದಲ್ಲಿ ಇದನ್ನು "ವಿರಾಠನಗರ" ಎಂದು ಹೆಸರಿಸಲಾಗಿದೆ. ಇಲ್ಲಿ ವಿರಾಟ ರಾಜನು ಆಡಳಿತ ನಡೆಸುತ್ತಿದ್ದನು ಪಾಂಡವರು ತಮ್ಮ ವನವಾಸ ಕಾಲದಲ್ಲಿ ವಿರಾಟನಗರದಲ್ಲಿ ಆಶ್ರಯವಿದ್ದರು ಎಂಬುದನ್ನು ನಾವು ಇತಿಹಾಸದಿಂದ ಅರಿತಿದ್ದೆವೆ.ಹಾನಗಲ್ಲ ಪುರಸಭೆ 2011 ರ ಜಗಣತಿ ಪ್ರಕಾರ 28804 ಜನಸಂಖ್ಯೆ ಹೊಂದಿದೆ.
ಹಾನಗಲ್ಲ ಪಟ್ಟಣವು ಪುರಸಭೆ ಯಾಗಿದ್ದು ಇದು 23 ವಾರ್ಡಗಳಾಗಿ ವಿಂಗಡನೆಯಾಗಿದೆ. ಹಾಗೇಯೆ ಪ್ರತಿ ವಾರ್ಡಿಗೆ ಒಬ್ಬರಂತೆ 23 ಸದಸ್ಯರನ್ನು ಹಾಗೂ 05 ನಾಮಾಂಕಿತ ಸದಸ್ಯರನ್ನು ಹೋಂದಿದೆ.
ABOUT HANAGAL TOWN:-
Hanagal was one of the oldest town situated on the bank or river ‘Darma’. It was also known as ‘Viratanagar’. History says that this hanagal city was once ruled by ‘Kadamba’s. The famous historical ‘TARAKESHWAR TEMPLE’ was built by ‘Kadamba’s. After Kadambas’s, it was also ruled by Bankapur Nawab’s. In Hanagal there is famous religous muslim darga. The population of the Hanagal town as per 2001 census was 25009. Very interesting thing of the town is that there is 50:50 ratio of both hindu and muslim communities of the over all population. as per 2011 census the town has 28004 population.
The TMC has divided in to 23 wards and equal number of councilors and 5 Numbers of Nominated Councilors. Hanagal TMC stretches to an area of 3.94 Sq Kms.
ಪುರಸಭೆ ಹಾನಗಲ್ಲಗೆ ಸಂಬಂಧಿಸಿದ ಸುದ್ದಿ:
1) ದಿನಾಂಕ:16-05-2012 ರ ಬುಧುವಾರದಂದು ಪುರಸಭೆಯ ಆವರಣದಲ್ಲಿ ಮರು ಹರಾಜು ಏರ್ಪಡಿಸಿದ್ದು ಈ ಹರಾಜಿನಲ್ಲಿ ಹಸೇಮೀನು ಮಾರುಕಟ್ಟೆ ಮಳಿಗೆ ನಂ 4 & 5 , ಬೀದಿ ದೀಪದ ನಾದುರಸ್ಥಾದ ಸಾಮಗ್ರಿಗಳು, ನೀರು ಸರಭರಾಜು ವಿಭಾಗದ ನಾದುರಸ್ಥ ಸಾಮಗ್ರಿಗಳು ಹರಾಜಾಗಲ್ಪಡಲಿವೆ. ಹೆಚ್ಚಿನ ಮಾಹಿತಿಗಾಗಿ ಪುರಸಭೆಗೆ ಸಂಪರ್ಕಿಸಲು ಈ ಮೂಲಕ ಸಾರ್ವಜನಿಕರಿಗೆ ಕೋರಲಾಗಿದೆ.
2) ಹಾನಗಲ್ಲ ಪುರಸಭೆಯಲ್ಲಿ ಸಕಾಲ ಯೋಜನಯು ಅನುಷ್ಠಾನಗೊಂಡು ಒಂದು ತಿಂಗಳಾಗಿದ್ದು ಇವರೆಗಿನ ಸ್ಥಿತಿ ಗಮನಿಸಿದಾಗ ಯೋಜನೆ ಅತ್ಯಂತ ಯಶಸ್ವಿಯಾಗಿ ಜಾರಿಯಾಗಿದೆ ಎಂದು ಹೇಳಬೇಕಾಗುತ್ತಿದೆ. ಈ ಒಂದು ತಿಂಗಳ ಅವಧಿಯಲ್ಲಿ ಒಟ್ಟು 106 ಅರ್ಜಿಗಳು ಸ್ವೀಕರಿಸಿದ್ದು ಎಲ್ಲ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿಗೊಳಿಸಲಾಗಿದ್ದು ಈ ಬಗ್ಗೆ ಪುರಸಭೆಯ ಅಧ್ಯಕ್ಷರು ಶ್ರೀಮತಿ ಹಸೀನಾಬಿ ನಾಯ್ಕರವರು ಅತ್ಯಂತ ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದೆ ಇದೇ ರೀತಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು. ಮುಖ್ಯಾಧಿಕಾರಿಗಳು ಯಾವುದೇ ಲೋಪದೋಷವಾಗದಂತ ಎಚ್ಚರಿಕೆ ವಹಿಸಲು ಸೂಚಿಸಿದರು. ಸಾರ್ವಜನಿಕರು ತಮ್ಮ ಅನೂಕೂಲಕ್ಕಾಗಿ ತಾವು ಸಲ್ಲಿಸಿದ ಅರ್ಜಿಗಳ ಸ್ಥಿತಿ ಗತಿ ಹಾಗೂ ವರದಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ
ಗಣಕೀಕರಣ:
ಹಾನಗಲ್ಲ ಪುರಸಭೆಯ ವ್ಯಾಪ್ತಿಯ ಎಲ್ಲಾ ಆಸ್ತಿಗಳ ಗುರುತಿಸಿ, ಆಸ್ತಿ ವಿವರವನ್ನು ಸಂಗ್ರಹಿಸಿದ್ದು ಸದ್ಯದಲ್ಲೇ ಮಾಹಿತಿಯನ್ನು ಗಣಕೀಕರಣ ಗೊಳಿಸಲಾಗುವುದು, ಹಾಗೇಯೆ ಸನ್ 1990 ರಿಂದ ಇತ್ತೀಚಿನ ವರೆಗಿನ ಜನನ/ಮರಣ ದಾಖಲೆಗಳ ಗಣಕೀಕರಣ ವಾಗಿದ್ದು ಈ ದಾಖಲೆಗಳನ್ನು ಆನಲೈನ ಮುಖಾಂತರ ಪಡೆಯಬಹುದಾಗಿದೆ. ಸಾರ್ವಜನಿಕ ಕುಂದುಕೊರತೆ ಘಟಕವು ಕಾರ್ಯ ನಿರ್ವಹಿಸುತ್ತಿದ್ದು ಸಾರ್ವಜನಿಕರು ಪುರಸಭೆ ಪೋನ್ ಸಂಖ್ಯೆ:262626 ಕ್ಕೆ ಕರೆ ಮಾಡಿ ಅಥವಾ ಖುದ್ದಾಗಿ ಕುಂದು ಕೊರತೆ ಘಟಕಕ್ಕೆ ಬಂದು ತಮ್ಮ ದೂರನ್ನು ನೊಂದಾಯಿಸಿ ಕೂಡಲೇ ತಮ್ಮ ಸಮಸ್ಯಗಳನ್ನು ಬಗೆ ಹರಿಸಿಕೊಳ್ಳಬೇಕಾಗಿ ವಿನಂತಿ.ಸಾರ್ವಜನಿಕರು ದೂರು ನೊಂದಾಯಿಸುವ ವಿಧಾನ
Computeraization:
Properties within Hanagal TMC Limit properties details identified and collected and these records computeraization under progress citizen can avial these facilitiy to to pay property tax shortly. birth and death record available online from 1990 and PGR Cell Establish in TMC Limit public can register there complaint through phone(our number is 262626) please requested to citizen to make use of these facilities Guidelines to Use PGR.
ಕೆ.ಎಂ.ಆರ್.ಪಿ ಗಣಕೀಕರಣ ಯೋಜನೆಯ ಕಿರಿ ಪರಿಚಯ
ಪೌರಸುಧಾರಣಾ ಕೋಶದ ಮೇಲುಸ್ತುವಾರಿಯಲ್ಲಿ ಹಾನಗಲ್ಲ ಪುರಸಭೆಯಲ್ಲಿ ಹಲವಾರು ಗಣಕೀಕರಣ ಯೋಜನೆಗಳು ಪೂರ್ಣಗೊಂಡಿರುತ್ತವೆ ಹಾಗೂ ಇನ್ನು ಕೆಲ ಗಣಕೀಕರಣ ಯೋಜನೆಗಳು ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಮುಕ್ತಾಯಗೊಂಡು ಸಾರ್ವಜನಿಕರ ಉಪಯೋಗಕ್ಕಾಗಿ ಲಭ್ಯವಾಗಲಿವೆ.ಈಗಾಗಲೇ ಬಹುತೇಕ ಮಾಹಿತಿಯನ್ನು ಕಛೇರಿ ವೆಬ್ ಸೈಟ್‌ನಲ್ಲಿ ಅಳವಡಿಸಲಾಗಿರುತ್ತದೆ.
- ಕಛೇರಿ ವೆಬ್‌ಸೈಟ್: ಹಾನಗಲ್ಲ ಪುರಸಭೆಯು ತನ್ನದೇ ಆದ ವೆಬ್‌ಸೈಟ್ ಹೊಂದಿದ್ದು ಪಟ್ಟಣದ ಸಮಗ್ರ ಮಾಹಿತಿ ಇದರಲ್ಲಿ ಲಭ್ಯವಿರುತ್ತದೆ. ಕಛೇರಿಯ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಬಿಂಬಿಸುವ ಸದುದ್ದೇಶದಿಂದ ಪೌರಸುಧಾರಣಾ ಕೋಶ ಈ ವೆಬ್ ಸೈಟ್ ಅಭಿವೃದ್ಧಿ ಪಡಿಸಿದ್ದು ಹಾನಗಲ್ಲ ಪುರಸಭೆಯಿಂದ ಈ ವೆಬ್ ಸೈಟ್ ನಿರ್ವಹಣೆ ಮಾಡಲಾಗುತ್ತಿದೆ. ಪ್ರಮುಖವಾಗಿ ಸಿಬ್ಬಂದಿ ಮಾಹಿತಿ, ಕೌನ್ಸಿಲ್ ಮಾಹಿತಿ, ಚುನಾಯಿತ ಪ್ರತಿನಿಧಿಗಳ ಮಾಹಿತಿ, ಟೆಂಡರ್ ಮಾಹಿತಿ, ಸಾರ್ವಜನಿಕ ಪ್ರಕಟಣೆ ಕಾಯ್ದೆ, ಮಾಹಿತಿ ಹಕ್ಕು, ಘನತ್ಯಾಜ್ಯ ವಸ್ತು ವಿಲೇವಾರಿ, ಮಳೆ ನೀರು ಕೊಯ್ಲು ಪದ್ಧತಿ, ಪಟ್ಟಣದ ರಸ್ತೆ, ಬೀದಿ ದೀಪ, ಚರಂಡಿ ಇತ್ಯಾದಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳು, ಪಟ್ಟಣದ ಹಣಕಾಸು ಪದ್ಧತಿ ವಿವರ, ಆಯ ವ್ಯಯ, ಸಭಾನಡವಳಿಗಳು ಇನ್ನು ಹತ್ತು ಹಲವು ಉಪಯುಕ್ತ ಮಾಹಿತಿ ಈ ವೆಬ್ ತಾಣದಲ್ಲಿ ಲಭ್ಯವಿರುತ್ತದೆ. ಪೌರ ಸುಧಾರಣಾ ಕೋಶದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿ ನಿರ್ವಹಿಸಲಾಗುತ್ತಿರುವ ಎಲ್ಲಾ ಆನ್‌ಲೈನ್ ಅಪ್ಲಿಕೇಷನ್‌ಗಳು ಈ ವೆಬ್ ತಾಣದಲ್ಲಿ ದೊರೆಯುವಂತಿದ್ದು ಪಟ್ಟಣದ ನಾಗರೀಕರು ಈ ತಾಣಕ್ಕೆ ಬೇಟಿ ನೀಡಿ ಅವಶ್ಯ ಮಾಹಿತಿ ಪಡೆಯಬಹುದಾಗಿರುತ್ತದೆ.
- ಜನನ-ಮರಣ ದಾಖಲೆಗಳ ಆನ್ ಲೈನ್ ಅಪ್ಲಿಕೇಷನ್:1990ರಿಂದ ಇಲ್ಲಿಯವರೆಗಿನ ಪಟ್ಟಣದ ಎಲ್ಲಾ ಜನನ-ಮರಣ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದ್ದು ಸಾರ್ವಜನಿಕರಿಗೆ ಗಣಕೀಕೃತ ಜನನ-ಮರಣ ದಾಖಲಾತಿಗಳನ್ನು ವಿತರಿಸಲಾಗುತ್ತಿದೆ. ಹಳೆಯ ಜನನ-ಮರಣ ದಾಖಲಾತಿಗಳ ಡಾಟಾ ಎಂಟ್ರಿ ಕಾರ್ಯ ಪೂರ್ಣಗೊಂಡಿರುತ್ತದೆ.
- ಪಿ.ಜಿ.ಆರ್. ಆನ್ ಲೈನ್ ಅಪ್ಲಿಕೇಷನ್: ಪಟ್ಟಣದ ನಾಗರೀಕರ ದೈನಂದಿನ ಅವಶ್ಯಕತೆಗಳಾದ ಬೀದಿ ದೀಪ, ಕುಡಿಯುವ ನೀರು, ಸ್ವಚ್ಚತೆ ಇತ್ಯಾದಿ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಕೇಂದ್ರ ಸ್ಥಾಪಿಸಲಾಗಿರುತ್ತದೆ. ಈ ಕುಂದುಕೊರತೆ ಪರಿಹಾರ ಕೇಂದ್ರವು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತದೆ.ಸಾರ್ವಜನಿಕರು ಕುಂದುಕೊರತೆ ಪರಿಹಾರ ಕೇಂದ್ರದ ಸಹಾಯವಾಣಿ : 08379-262626 ಕ್ಕೆ ಕರೆ ಮಾಡಿ ದೂರು ನೊಂದಾಯಿಸಿಕೊಳ್ಳಬಹುದಾಗಿದೆ ಅಲ್ಲದೆ ತಮ್ಮ ದೂರಿನ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಅದೇ ರೀತಿ ಈ ಕಛೇರಿ ವೆಬ್ ತಾಣಕ್ಕೆ ಬೇಟಿ ನೀಡಿ ಪಿ.ಜಿ.ಆರ್. ಆನ್‌ಲೈನ್ ಅಪ್ಲಿಕೇಷನ್ ಮುಖಾಂತರವೂ ದೂರು ನೊಂದಾಯಿಸಬಹುದಾಗಿರುತ್ತದೆ(ಸಾರ್ವಜನಿಕರು ದೂರು ನೊಂದಾಯಿಸುವ ವಿಧಾನ) ಅಥವಾ ನೇರವಾಗಿ ಕುಂದು ಕೊರತೆ ಪರಿಹಾರ ಕೇಂದ್ರಕ್ಕೆ ಬೇಟಿ ನೀಡಿ ದೂರು ನೊಂದಾಯಿಸಬಹುದಾಗಿರುತ್ತದೆ. ದೂರು ಸ್ವೀಕರಿಸಿದ ನಂತರ ಕುಂದು ಕೊರತೆ ಪರಿಹಾರ ಕೇಂದ್ರದ ನಿರ್ವಾಹಕರು ಒಂದು " Unique Complaint Tracking Number " ನೀಡುವರು. ಇದರ ಸಹಾಯದಿಂದ ನಾಗರೀಕರು ತಮ್ಮ ದೂರಿನ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ದೂರು ಪರಿಹಾರ ಕಾರ್ಯದ ಪ್ರತಿ ಹಂತದ ಸ್ಥಿತಿಯನ್ನು ಇ-ಮೇಲ್ ಮೂಲಕ ಸಹ ಇ-ಮೇಲ್ ವಿಳಾಸ ನೊಂದಾಯಿಸಿ ಪಡೆಯಬಹುದಾಗಿರುತ್ತದೆ.
- ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ ಅನುಷ್ಟಾನ ಕಾರ್ಯ:ಪೌರ ಸುಧಾರಣಾ ಯೋಜನೆಯಡಿ ಹಾನಗಲ್ಲ ಪುರಸಭೆಯಲ್ಲಿ ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ ಅನುಷ್ಟಾನ ಅತೀ ಪ್ರಮುಖ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪಟ್ಟಣದ ಎಲ್ಲಾ ಆಸ್ತಿಗಳ ಸರ್ವೆಕಾರ್ಯ ಪೂರ್ಣಗಳಿಸಿ, ಆಸ್ತಿಗಳ ವಿವರ (ನಮೂನೆ "ಸಿ") ಡಾಟಾ ಎಂಟ್ರಿ ಮಾಡಿಸಿ ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿಯೇ ಪೌರ ಸುಧಾರಣಾ ಕೋಶದಿಂದ ಆನ್‌ಲೈನ್ ಮಾಡಲಾಗುವುದು.ಇದರಿಂದ ಪಟ್ಟಣದ ಆಸ್ತಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು, ಆಸ್ತಿ ತೆರಿಗೆ ವಿವರ ಗಳನ್ನು ಸಹ ಸಾರ್ವಜನಿಕರು ಆನ್‌ಲೈನ್ ಮೂಲಕ ಪಡೆಯಬಹುದಾಗಿರುತ್ತದೆ ಹಾಗೂ ಆನ್ ಲೈನ್ ಮೂಲಕ ತೆರಿಗೆ ಆಸ್ತಿತೆರಿಗೆ ಪಾವತಿಸಬಹುದಾಗಿದ್ದು ಹಾನಗಲ್ಲ ಪಟ್ಟಣದ ನಾಗರೀಕರು ಶೀಘ್ರದಲ್ಲಿಯೇ ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ.
- ನಿಧಿ ಆಧಾರಿತ ದ್ವಿ-ನಮೂದು ಸಂಚಯನ ಲೆಕ್ಕ ಪದ್ಧತಿ: ಹಾನಗಲ್ಲ ಪುರಸಭೆ ಕಛೇರಿಯಲ್ಲಿ ನಿಧಿ ಆಧಾರಿತ ದ್ವಿನಮೂದು ಸಂಚಯನ ಲೆಕ್ಕ ಪದ್ಧತಿಯನ್ನು ಈಗಾಗಲೇ ಗಣಕೀಕರಣಗೊಳಿಸಲಾಗಿದ್ದು ಈ ಆನ್‌ಲೈನ್ ಅಪ್ಲಿಕೇಷನ್ ಮುಖಾಂತರ ನಗರ ಸ್ಥಳೀಯ ಸಂಸ್ಥೆಯ ಎಲ್ಲಾ ಯೋಜನೆಗಳ ಆರ್ಥಿಕ ಅಂಕಿ ಅಂಶಗಳನ್ನು ಕಛೇರಿಯ ಲೆಕ್ಕಿಗರು ದಿನಂಪ್ರತಿ ಅಪ್‌ಡೇಟ್ ಮಾಡುತ್ತಿದ್ದು ಕಛೇರಿಯ ಆಯ-ವ್ಯಯದ ಸಮರ್ಪಕ ನಿರ್ವಹಣೆಗೆ ಸಹಕಾರಿಯಾಗಿದೆ. ಈ ಆನ್‌ಲೈನ್ ಅಪ್ಲಿಕೇಷನ್ ಮುಖಾಂತರ ವಾರ್ಷಿಕ ಕಾರ್ಯ ನಿರ್ವಹಣಾ ವರದಿಯನ್ನೂ ಸಹ ಪಡೆಯಬಹುದಾಗಿದ್ದು ಕಛೇರಿಯ ಎಲ್ಲಾ ಆರ್ಥಿಕ ಚಟುವಟಿಕೆಗಳ ವಿವರ ಕಛೇರಿ ವೆಬ್‌ಸೈಟ್ ಮೂಲಕ ಅಂತರ್ಜಾಲದಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತದೆ.
- ಇತರೆ ಆನ್‌ಲೈನ್ ಅಪ್ಲಿಕೇಷನ್‌ಗಳು: ಸಿ.ಎಂ.ಎಸ್.ಎಂ.ಟಿ.ಡಿ.ಪಿ, ಆಶಾಕಿರಣ ಮಾಹಿತಿ, ಎಸ್.ಜೆ.ಎಸ್.ಆರ್.ವೈ, ಎಸ್.ಎಲ್.ಬಿ, ನಮ್ಮ ಮನೆ ಇತ್ಯಾದಿ ಪ್ರಮುಖ ಆನ್ ಲೈನ್ ಅಪ್ಲಿಕೇಷನ್ ಗಳನ್ನು ಪೌರಸುಧಾರಣಾ ಕೋಶದ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಲಾಗಿದ್ದು ಕಛೇರಿಯ ಸುಲಭ ನಿರ್ವಹಣೆಗೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಈ ಆನ್‌ಲೈನ್ ಅಪ್ಲಿಕೇಷನ್‌ಗಳ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ
This Page is maintained by:chief Officer
Last Updated on: 15-05-2012

